ಉಮಾ ನೆಹರು (೮ ಮಾರ್ಚ್ ೧೮೮೪ - ೨೮ ಆಗಸ್ಟ್ ೧೯೬೩) ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕಾರಣಿ. == ವೃತ್ತಿ == ೨೦ ನೇ ಶತಮಾನದ ಆರಂಭದಲ್ಲಿ, ಅವರು ೧೯೦೯ರಲ್ಲಿ ರಾಮೇಶ್ವರಿ ನೆಹರು ಅವರು ಸ್ಥಾಪಿಸಿದ ಸ್ತ್ರೀ ದರ್ಪಣ್ ಎಂಬ ಮಹಿಳಾ ಮಾಸಪತ್ರಿಕೆಯಲ್ಲಿ ಆಗಾಗ್ಗೆ ಬರೆಯುತ್ತಿದ್ದರು. ಇದರಲ್ಲಿ ಅವರು ಸ್ತ್ರೀವಾದಿ ದೃಷ್ಟಿಕೋನಗಳನ್ನು ವ್ಯಕ್ತಪಡಿಸುತ್ತಿದ್ದರು. ಅವರು ಸಾಲ್ಟ್ ಮಾರ್ಚ್ ಮತ್ತು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದರು ಮತ್ತು ನಂತರ ಜೈಲುವಾಸ ಅನುಭವಿಸಿದರು. ಸ್ವಾತಂತ್ರ್ಯದ ನಂತರ, ಅವರು ಉತ್ತರ ಪ್ರದೇಶದ ಸೀತಾಪುರದಿಂದ ಲೋಕಸಭೆಗೆ ಎರಡು ಬಾರಿ ಆಯ್ಕೆಯಾದರು. ೧೯೬೨ ರಿಂದ ಸಾಯುವವರೆಗೂ ಅವರು ರಾಜ್ಯಸಭೆಯ ಸದಸ್ಯರಾಗಿದ್ದರು. == ವೈಯಕ್ತಿಕ ಜೀವನ == ಆಗ್ರಾದಲ್ಲಿ ಜನಿಸಿದ ನೆಹರು ಹುಬ್ಬಳ್ಳಿಯ ಸೇಂಟ್ ಮೇರಿಸ್ ಕಾನ್ವೆಂಟ್‌ನಲ್ಲಿ ಶಿಕ್ಷಣ ಪಡೆದರು. ೧೯೦೧ ರಲ್ಲಿ ಅವರು ಜವಾಹರಲಾಲ್ ನೆಹರೂ ಅವರ ಸೋದರಸಂಬಂಧಿ ಶಾಮಲಾಲ್ ಅವರನ್ನು ವಿವಾಹವಾದರು. ದಂಪತಿಗೆ ಶ್ಯಾಮ್ ಕುಮಾರಿ ಎಂಬ ಮಗಳು ಮತ್ತು ಆನಂದ್ ಕುಮಾರ್ ಎಂಬ ಮಗನಿದ್ದರು. ಆನಂದ್ ಕುಮಾರ್ ನೆಹರು ಅವರ ಮಗ ಅರುಣ್ ನೆಹರು ೧೯೮೦ರ ದಶಕದಲ್ಲಿ ರಾಜೀವ್ ಗಾಂಧಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು . ಉಮಾ ನೆಹರು ೨೮ ಆಗಸ್ಟ್ ೧೯೬೩ ರಂದು ಲಕ್ನೋದಲ್ಲಿ ನಿಧನರಾದರು. == ಉಲ್ಲೇಖಗಳು == == ಗ್ರಂಥಸೂಚಿ == « ನ ನೋಟ: ರಾಮೇಶ್ವರಿ ಮತ್ತು ಉಮಾ ನೆಹರು ' | ಸ್ಟೋರಿಯಾ ಡೆಲ್ಲೆ ಡೊನ್ನೆ», ೧೦ ಲುಗ್ಲಿಯೊ ೨೦೨೦ ://.././///2520/2520 .